ಖಿನ್ನತೆ ಮತ್ತು ಚಿಂತೆಯನ್ನು ಜಯಿಸಲು 5 ಹಂತಗಳು!

Spread the love

ಚಿಂತೆ ಮತ್ತು ಖಿನ್ನತೆಯನ್ನು ಸುಲಭವಾಗಿ ಜಯಿಸಲು ನಿಮಗೆ ಸಹಾಯ ಮಾಡುವ ಕ್ರಮಗಳು.
ಪ್ರತಿಯೊಬ್ಬ ವ್ಯಕ್ತಿಯು ಅವನ/ಅವಳ ಜೀವನದಲ್ಲಿ ಒಂದು ಹಂತದಲ್ಲಿ ಕೆಟ್ಟ ಹಂತವನ್ನು ಎದುರಿಸುತ್ತಾನೆ.

1. ಸಮಸ್ಯೆಯನ್ನು ಗುರುತಿಸಿ:

ನೀವು ಕೆಲಸವನ್ನು ಕಳೆದುಕೊಂಡಿರಬಹುದು, ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಬಹುದು ಇತ್ಯಾದಿ. ಅದು ಯಾವುದಾದರೂ ಆಗಿರಬಹುದು. ವಿಷಯವು ಎಲ್ಲಿ ತಪ್ಪಾಗಿದೆ ಎಂಬುದನ್ನು ನೀವು ಗುರುತಿಸಬೇಕು.

2. ಹಳೆಯ ನಂಬಿಕೆಗಳನ್ನು ಕಿತ್ತುಹಾಕಿ:

ಜನರು ತಮ್ಮ ಕಂಫರ್ಟ್ಜೋನಲ್ಲಿ ಇರಲು ಇಷ್ಟಪಡುತ್ತಾರೆ. ಅವರು ಹೊಸದನ್ನು ಮತ್ತು ಚಾಲೆಂಜಿಂಗ್ ಅನ್ನುವಂತಹ ಕೆಲಸವನ್ನು ಮಾಡಲು ಇಷ್ಟಪಡುವುದಿಲ್ಲ.

ಉದಾಹರಣೆಗೆ : ನಾವು ತುಂಬ ದಪ್ಪಗಿದ್ದರೆ ನಮ್ಮ ನಂಬಿಕೆಯ ವ್ಯವಸ್ಥೆ ಹೀಗಿರುತ್ತೆ : ನಾನು ಮತ್ತೆ ಎಂದಿಗೂ ಫಿಟ್ಟಾಗಿರಲು ಸಾಧ್ಯವಿಲ್ಲ , ಈ ಸಣ್ಣ ತಪ್ಪು ಕಲ್ಪನೆಯು ಪ್ರತಿ ಬಾರಿಯೂ ನಮಗೆ ನೋವುಂಟು ಮಾಡುತ್ತದೆ.

ನಮ್ಮ ಬಗ್ಗೆ ನಮಗೆ ವಿಶ್ವಾಸವಿದ್ದರೆ ನಾವು ನಮ್ಮ ದೇಹದ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು.

3. ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಿ:

ನಿಮ್ಮ ಪೋಷಕರು ನಿಮ್ಮ ಅತೀ ದೊಡ್ಡ ಸಹಾಯಕರಾಗಿದ್ದಾರೆ. ಅವರು ಯಾವಾಗಲೂ ನಿಮಗೆ ಒಳ್ಳೆಯದನ್ನು ಬಯಸುತ್ತಾರೆ.

ಆದ್ದರಿಂದ ನಿಮ್ಮ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನೀವು ಅವರಿಗೆ ವಿವರಿಸಿದರೆ, ಬಹುಶಃ ಅವರು ನಿಮಗೆ ಸಹಾಯ ಮಾಡಬಹುದು

ಆದರೆ ನಿಮ್ಮ ಪೋಷಕರೊಂದಿಗೆ ನೀವು ಮಾತನಾಡಲು ನಿಮಗೆ Uncomforting ಅನಿಸಿದರೆ, ನೀವು ನಿಮ್ಮ ಸಹೋದರ ಅಥವಾ ಆಪ್ತರೊಂದಿಗೆ ಮಾತನಾಡಬಹುದು.

ಇಲ್ಲಿರುವ ಅಂಶವೆಂದರೆ: ನೀವು ಮೊದಲು ಇದೇ ಪರಿಸ್ಥಿತಿಯಲ್ಲಿದ್ದಂತ ಯಾರೊಂದಿಗಾದರೂ ಮಾತನಾಡ. ನಂತರ ನೀವು ಸರಿಯಾದ solution ಪಡೆಯಬಹು.

4. ಇತರರರೊಂದಿಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ:

ಇತರರರೊಂದಿಗೆ ಹೋಲಿಕೆ ಮಾಡುವುದು ನಿಮ್ಮ ಚಿಂತೆಯ ಅತೀ ದೊಡ್ಡ ಸಮಸ್ಯೆಯಾಗಿದೆ

ನಮ್ಮೊಳಗೆ ಅನಿಯಮಿತ ಸಾಮರ್ಥ್ಯವಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿರುತ್ತಾನೆ. ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ವಿಭಿನ್ನವಾಗಿವೆ.

ಆದ್ದರಿಂದ ಜನರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದು ನಿಮ್ಮ ಬಗ್ಗೆ ನಿಮಗೆ ಅಗೌರವ ಉಂಟಾಗುತ್ತದೆ. ಇದು ನಿಮ್ಮ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನಿನ್ನೆ ನೀವೇನಾಗಿದ್ದರೊ ಅದನ್ನ ಹೋಲಿಸಿಕೊಳ್ಳಿ, ಇಂದು ಯಾರೊ ಏನಾಗಿದ್ದರೊ ಅದನ್ನಲ್ಲ.

5. ನಿಮ್ಮ ಜೀವನದಿಂದ ವಿಷಕಾರಿ ಜನರನ್ನು ತೆಗೆದುಹಾಕಿ:

ಯಾವಾಗಲೂ ನಿಮ್ಮನ್ನು ಕೀಳಾಗಿ ಕಾಣುವವರು ಅಥವಾ ನಿಮ್ಮನ್ನು ಅವಮಾನಿಸಲು ಪ್ರಯತ್ನಿಸುವ ಜನರನ್ನು ನಿಮ್ಮ ಜೀವನದಿಂದ ತೆಗೆದುಹಾಕಿ.

ನಿಮ್ಮನ್ನು ಬೆಂಬಲಿಸುವ ಅಥವಾ ಯಾವಾಗಲೂ ನಿಮ್ಮ ಒಳ್ಳೆಯದನ್ನು ಬಯಸುವವರೊಂದಿಗೆ ಇರಿ.

ಕೆಲವರು ಈ ಮಾತನ್ನು ಒಪ್ಪದಿರಬಹುದು, ಏಕೆಂದರೆ ಜನರು ಸಾಮಾನ್ಯವಾಗಿ ಸ್ನೇಹವನ್ನು ಮುರಿಯಲು ಇಷ್ಟಪಡುವುದಿಲ್ಲ.

ಆದರೆ ಕೆಲವು ಸಂದರ್ಭಗಳಲ್ಲಿ ನಿಮ್ಮ ಜೀವನದ ಸುಧಾರಣೆಗಾಗಿ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.


Spread the love

Leave a Reply

Your email address will not be published. Required fields are marked *